Posts

Image
ಕೊಡಗಿನ ದುರಂತಕ್ಕೆ ಕಾರಣವೇನು? ಅಮೆರಿಕದ ಉಪಕರಣದಿಂದ ಬೆಳಕಿಗೆ ಬಂದಿದೆ ಸತ್ಯ ಕೊಡಗಿನಲ್ಲಿ ಕಳೆದ ಎರಡು ತಿಂಗಳ ಹಿಂದೆ ಜಲಪ್ರಳಯ ಉಂಟಾಗಿ ನೂರಾರು ಮನೆಗಳು ಕೊಚ್ಚಿ ಹೋಗಿದ್ದವು. 18 ಜನರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಆದ್ರೆ ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾದರೂ ಏನು? Vijayasarthy SN Updated: October 21, 2018, 7:08 PM IST ಕೊಡಗು ದುರಂತದ ಸಂದರ್ಭ - ರವಿ ಎಸ್. ಹಳ್ಳಿ, ನ್ಯೂಸ್18 ಕನ್ನಡ ಕೊಡಗು(ಅ. 21):  ಆಗಸ್ಟ್ ತಿಂಗಳಲ್ಲಿ ಇಲ್ಲಿ ಸಂಭವಿಸಿದ ಜಲ ಪ್ರಳಯ ಮತ್ತು ಭೂಕುಸಿತ ನೆನಪಿಸಿಕೊಂಡರೆ ಈಗಲೂ ಮೈ ನಡುಗಿ ಬಿಡುತ್ತದೆ. ಇಷ್ಟು ಭೀಕರ ಅನಾಹುತಕ್ಕೆ ಸ್ಪಷ್ಟ ಕಾರಣಗಳು ಸಿಕ್ಕದೆ ವಿವಿಧ ವಾದ ಪ್ರತಿವಾದಗಳು ನಡೆಯುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಭೂಗರ್ಭ ಶಾಸ್ತ್ರಜ್ಞರ ತಂಡವೊಂದು ಅಮೆರಿಕದ ಅತ್ಯಾಧುನಿಕ ಉಪಕರಣ ಬಳಸಿ ಈ ಪ್ರಶ್ನೆಗೆ ಉತ್ತರ ಹುಡುಕುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯದ ಪ್ರೊಫೇಸರ್ ರೇಣುಕಾಪ್ರಸಾದ್ ಮತ್ತು ಡಾ. ಪರಮೇಶ್ ನಾಯಕ್ ನೇತೃತ್ವದ ಭೂಗರ್ಭ ಶಾಸ್ತ್ರಜ್ಞರ ತಂಡವು ಅಡ್ವಾನ್ಸ್ ಸಬ್‍ಸರ್ಫೇಸ್ ಪರೀಕ್ಷೆಯ ಉಪಕರಣವನ್ನು ಬಳಸಿ ಭೂಗರ್ಭದಾಳದಲ್ಲಿನ ಬೆಳವಣಿಗೆ ಕುರಿತು ಅಧ್ಯಯನ ನಡೆಸುತ್ತಿದೆ. ಈ ತಂಡಕ್ಕೆ ಸಿಕ್ಕಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಕೊಡಗಿನಲ್ಲಿ ಭೂಕುಸಿತ ದುರಂತಗಳಿಗೆ ಕಾರಣವಾಗಿದ್ದು ಭೂಕಂಪವೆನ್ನಲಾಗಿದೆ. ಭೂಕುಸಿತವಾಗಿರುವ ಸ್ಥಳದಿಂದ