ಕೊಡಗಿನ ದುರಂತಕ್ಕೆ ಕಾರಣವೇನು? ಅಮೆರಿಕದ ಉಪಕರಣದಿಂದ ಬೆಳಕಿಗೆ ಬಂದಿದೆ ಸತ್ಯ

ಕೊಡಗಿನಲ್ಲಿ ಕಳೆದ ಎರಡು ತಿಂಗಳ ಹಿಂದೆ ಜಲಪ್ರಳಯ ಉಂಟಾಗಿ ನೂರಾರು ಮನೆಗಳು ಕೊಚ್ಚಿ ಹೋಗಿದ್ದವು. 18 ಜನರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಆದ್ರೆ ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾದರೂ ಏನು?

Vijayasarthy SN
Updated:October 21, 2018, 7:08 PM IST
ಕೊಡಗಿನ ದುರಂತಕ್ಕೆ ಕಾರಣವೇನು? ಅಮೆರಿಕದ ಉಪಕರಣದಿಂದ ಬೆಳಕಿಗೆ ಬಂದಿದೆ ಸತ್ಯ
ಕೊಡಗು ದುರಂತದ ಸಂದರ್ಭ
- ರವಿ ಎಸ್. ಹಳ್ಳಿ, ನ್ಯೂಸ್18 ಕನ್ನಡ

ಕೊಡಗು(ಅ. 21): ಆಗಸ್ಟ್ ತಿಂಗಳಲ್ಲಿ ಇಲ್ಲಿ ಸಂಭವಿಸಿದ ಜಲ ಪ್ರಳಯ ಮತ್ತು ಭೂಕುಸಿತ ನೆನಪಿಸಿಕೊಂಡರೆ ಈಗಲೂ ಮೈ ನಡುಗಿ ಬಿಡುತ್ತದೆ. ಇಷ್ಟು ಭೀಕರ ಅನಾಹುತಕ್ಕೆ ಸ್ಪಷ್ಟ ಕಾರಣಗಳು ಸಿಕ್ಕದೆ ವಿವಿಧ ವಾದ ಪ್ರತಿವಾದಗಳು ನಡೆಯುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಭೂಗರ್ಭ ಶಾಸ್ತ್ರಜ್ಞರ ತಂಡವೊಂದು ಅಮೆರಿಕದ ಅತ್ಯಾಧುನಿಕ ಉಪಕರಣ ಬಳಸಿ ಈ ಪ್ರಶ್ನೆಗೆ ಉತ್ತರ ಹುಡುಕುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯದ ಪ್ರೊಫೇಸರ್ ರೇಣುಕಾಪ್ರಸಾದ್ ಮತ್ತು ಡಾ. ಪರಮೇಶ್ ನಾಯಕ್ ನೇತೃತ್ವದ ಭೂಗರ್ಭ ಶಾಸ್ತ್ರಜ್ಞರ ತಂಡವು ಅಡ್ವಾನ್ಸ್ ಸಬ್‍ಸರ್ಫೇಸ್ ಪರೀಕ್ಷೆಯ ಉಪಕರಣವನ್ನು ಬಳಸಿ ಭೂಗರ್ಭದಾಳದಲ್ಲಿನ ಬೆಳವಣಿಗೆ ಕುರಿತು ಅಧ್ಯಯನ ನಡೆಸುತ್ತಿದೆ. ಈ ತಂಡಕ್ಕೆ ಸಿಕ್ಕಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಕೊಡಗಿನಲ್ಲಿ ಭೂಕುಸಿತ ದುರಂತಗಳಿಗೆ ಕಾರಣವಾಗಿದ್ದು ಭೂಕಂಪವೆನ್ನಲಾಗಿದೆ.

ಭೂಕುಸಿತವಾಗಿರುವ ಸ್ಥಳದಿಂದ 280 ಮೀಟರ್ ಸುತ್ತಳತೆಯಲ್ಲಿ ಅಡ್ವಾನ್ಸ್ ಸಬ್ ಸರ್ಫೇಸ್ ಪರೀಕ್ಷೆಯ ಉಪಕರಣದಿಂದ ಅಧ್ಯಯನ ನಡೆಸಲಾಗುತ್ತಿದೆ. ಇದು ಸುಮಾರು 500 ಮೀಟರ್ ಅಡಿ ಆಳದವರೆಗಿನ ಭೂಮಿಯಾಳದ ಚಿತ್ರವನ್ನು ಸೆರೆಹಿಡಿದು 2ಡಿ ಮತ್ತು 3ಡಿ ಚಿತ್ರಗಳನ್ನು ಬಿಡುಗಡೆ ಮಾಡುತ್ತದೆ. ಹೀಗಾಗಿ ಕೊಡಗಿನಲ್ಲಿ ಆಗಿರುವ ಭೂಕುಸಿತಕ್ಕೆ ನೈಜ ಕಾರಣ ತಿಳಿದುಕೊಳ್ಳುವ ವೈಜ್ಞಾನಿಕ ಪ್ರಯತ್ನವನ್ನು ಪ್ರೊಫೇಸರ್ ತಂಡ ನಡೆಸಿದೆ. ಇವರು ಹೇಳುವ ಪ್ರಕಾರ ಇಲ್ಲಿ ಭೂ ಕಂಪನವಾಗಿದೆ. ಇದು ಜನರಿಗೂ ಕೂಡ ಗಮನಕ್ಕೆ ಬಂದಿದೆ. ಆದ್ರೆ ಇದನ್ನು ದಾಖಲಿಸುವ ಯಂತ್ರಗಳು ಇಲ್ಲಿ ಇಲ್ಲದ ಕಾರಣ ಭೂಕಂಪನದ ಸಾಧ್ಯತೆಗಳನ್ನು ಅಧಿಕಾರಿಗಳು ತಳ್ಳಿಹಾಕಿದ್ದಾರೆ ಎನ್ನೋದು ಡಾ. ಪರಮೇಶ್ ನಾಯಕ್ ಅವರ ಅಭಿಪ್ರಾಯ.

ಯಾವತ್ತೋ ಆದ ಭೂಕಂಪದಿಂದ ಈಗ ಯಾಕೆ ಪರಿಣಾಮ?


ಎಂದೋ ಆಗಿರುವ ಭೂಕಂಪದಿಂದಾಗಿ ಭೂಮಿಯಲ್ಲಿ ಬಿರುಕುಗಳು ನಿರ್ಮಾಣವಾಗಿರುತ್ತವೆ. ಈ ವೀಕ್ ಝೋನ್ಸ್ ಅಥವಾ ಬಿರುಕುಗಳ ಮೂಲಕ ಅಪಾರ ಪ್ರಮಾಣದ ನೀರು ಭೂಮಿಯೊಳಕ್ಕೆ ಹೋಗುತ್ತದೆ. ಕೊನೆಗೆ ಅದರ ಒತ್ತಡವನ್ನು ತಡೆಯಲಾರದೆ ನೀರು ಭೂಮಿಯನ್ನು ಕೊಚ್ಚಿಕೊಂಡು ಬರುತ್ತದೆ. ಕೊಡಗಿನಲ್ಲಿ ಭೂ ಕುಸಿತ ಆಗಿರೋದು ಇದೇ ಕಾರಣದಿಂದಲೇ. ಎಲ್ಲಿ ಗಟ್ಟಿ ಬಂಡೆಗಳ ಪದರವಿರುತ್ತದೆಯೋ ಅಲ್ಲಿ ಭೂಕುಸಿತ ಆಗುವುದಿಲ್ಲ. ಎಲ್ಲಿ ವೀಕ್ ಝೋನ್ಸ್ ಇರುತ್ತವೆಯೋ ಅಲ್ಲಿ ಯಾವುದೇ ಕಟ್ಟಡ ಅಥವಾ ಕೃಷಿ ಚಟುವಟಿಕೆ ಮಾಡಬಾರದು. ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳುವ ಮೊದಲು ಇಂತಹ ಉಪಕರಣಗಳನ್ನು ಬಳಸಿ ಭೂಮಿಯ ಗುಣದ ಬಗ್ಗೆ ಅಧ್ಯಯನ ನಡೆಸಿದರೆ, ಇಂತಹ ಅನಾಹುತಗಳನ್ನು ತಡೆಗಟ್ಟಬಹುದು. ಪರಿಸರ ಮತ್ತು ಭೂಗರ್ಭ ಇಲಾಖೆಯವರಿಗೆ ಇಂತಹ ಉಪಕರಣಗಳ ಅಗತ್ಯವಿದೆ. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು 2ಡಿ ಚಿತ್ರ ಸಹಿತ ವಿವರಿಸಿದ್ದಾರೆ.

ಒಟ್ಟಿನಲ್ಲಿ ಕೊಡಗಿನಲ್ಲಿ ಭೂಕಂಪನವಾಗಿ, ವೀಕ್ ಝೋನ್ಸ್ ನಿರ್ಮಾಣವಾಗಿವೆ. ಈ ವೀಕ್‍ಜೋನ್ಸ್ ಮೂಲಕ ಅಪಾರ ನೀರು ಹೋಗಿದ್ದೇ ಇಡೀ ಬೆಟ್ಟಗುಡ್ಡಗಳು ಕುಸಿದು ಇಂತಹ ಅನಾಹುತಕ್ಕೆ ಕಾರಣವಾಗಿದೆ ಎನ್ನೋ ಸತ್ಯವನ್ನ ಈ ಪ್ರೊಫೆಸರ್‍ಗಳ ಬಿಚ್ಚಿಟ್ಟಿದ್ದಾರೆ. ಇನ್ನಾದ್ರೂ ಸಂಬಂಧಿಸಿದ ಇಲಾಖೆಯವರು ಇಂತಹ ಯಂತ್ರಗಳನ್ನು ಬಳಸಿ ಮತ್ತಷ್ಟು ಅಪಾಯಗಳನ್ನು ತಪ್ಪಿಸುವ ಅಗತ್ಯವಿದೆ.
First published:October 21, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

ಮೈಸೂರಿನ ಅರಮನೆಯಲ್ಲಿ ಇಂದು ಖಾಸಗಿ ದಸರಾ ಕಾರ್ಯಕ್ರಮ

G Hareeshkumar | news18
Updated: October 22, 2018, 9:34 AM IST
ಮೈಸೂರಿನ ಅರಮನೆಯಲ್ಲಿ ಇಂದು ಖಾಸಗಿ ದಸರಾ ಕಾರ್ಯಕ್ರಮ
 ನ್ಯೂಸ್ 18 ಕನ್ನಡ 
ಮೈಸೂರು ( ಅ.22) :  ಅರಮನೆಯಲ್ಲಿ ಎರಡು ಸಾವುಗಳು ಆಗಿದ್ದರಿಂದ ನವರಾತ್ರಿ  ನವರಾತ್ರಿ ಉತ್ಸವದ ಕೊನೆಯ ಕಾರ್ಯಕ್ರಮಗಳು ರದ್ದಾಗಿದ್ದವು. ಈ ಹಿನ್ನೆಲೆಯಲ್ಲಿ ಇಂದು ಅರಮನೆಯಲ್ಲಿ ವಿಜಯ ದಶಮಿಯ ಕಾರ್ಯಕ್ರಮ ಮುಂದುವರಿಯಲಿದೆ .
ಅರಮನೆ ಅಂಗಳದಲ್ಲಿ ಖಾಸಗಿ ದಸರಾ ನಡೆಲಿದೆ. ವಿಜಯ ದಶಮಿಯ ಸಾಂಪ್ರದಾಯಿಕ ಪೂಜೆ, ಪುನಸ್ಕಾರವು. ಬೆಳಗ್ಗೆ ಆನೆ ಬಾಗಿಲಿಗೆ ಪಟ್ಟದ ಆನೆ, ಹಸು, ಕುದುರೆ ಆಗಮನ ವಾಗುತ್ತದೆ. ನಂತರ ಉತ್ತರ ಪೂಜೆ ಹಾಗೂ ಖಾಸಾ ಪೂಜೆ. ಅರಮನೆಯ ಕಲ್ಯಾಣ ಮಂಟಪದಲ್ಲಿ ಪೂಜೆ ನಡೆಯಲಿದೆ. ಬೆಳಗ್ಗೆ 9.30 ಶ್ರೀ ಭುವನೇಶ್ವರಿ ದೇವಾಲಯಕ್ಕೆ ಆಯುಧಗಳು ಹೊಗುತ್ತವೆ. ಬೆಳಿಗ್ಗೆ  9.45ಕ್ಕೆ ಜಟ್ಟಿ ಕಾಳಗ ನಡೆಯಲಿದೆ.
ಬೆಂಗಳೂರು, ಚಾಮರಾಜನಗರ, ಮೈಸೂರಿನ ಜಟ್ಟಿಗಳಿಂದ ಕಾಳಗ ನಡೆಲಿದ್ದು,
ವಜ್ರ ಮುಷ್ಠಿ ಹಿಡಿದು ಮಟ್ಟಿ ಮೇಲೆ ಕುಸ್ತಿ ಮಾಡಿ,  ಜಟ್ಟಿಗಳ ತಲೆಯಿಂದ ರಕ್ತ ಚಿಮ್ಮಿದ ಮೇಲೆ ವಿಜಯ ಯಾತ್ರೆ. ನಂತರ ಬೆಳ್ಳಿ ರಥದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬೆಳ್ಳಿ ರಥದಲ್ಲಿ ಕುಳಿತು ದೇವಾಲಯಕ್ಕೆ ಯಾತ್ರೆ ಮಾಡಿ ಬನ್ನಿ ಮರಕ್ಕೆ ಯದುವೀರ ಪೂಜೆ ನೇರವೆರಿಸುವರು.

First published: October 22, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

ಇಂದಿನಿಂದ ಏಳು ದಿನ ದತ್ತಮಾಲಾ ಅಭಿಯಾನ; ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್

HR Ramesh | news18
Updated: October 22, 2018, 9:23 AM IST
ಇಂದಿನಿಂದ ಏಳು ದಿನ ದತ್ತಮಾಲಾ ಅಭಿಯಾನ; ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್
ಪ್ರಮೋದ್ ಮುತಾಲಿಕ್
ನ್ಯೂಸ್ 18 ಕನ್ನಡ
ಚಿಕ್ಕಮಗಳೂರು (ಅ.22): ಇಂದಿನಿಂದ ಏಳು ದಿನಗಳ ಕಾಲ ಶ್ರೀರಾಮಸೇನೆ ವತಿಯಿಂದ ದತ್ತಮಾಲಾ ಅಭಿಯಾನ ನಡೆಯಲಿದೆ. ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಅಭಿಯಾನ ನಡೆಯಲಿದ್ದು, ಸಾವಿರಾರು ಕಾರ್ಯಕರ್ತರು ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಚಿಕ್ಕಮಗಳೂರು ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ‌ 9 ಗಂಟೆಗೆ ದತ್ತಮಾಲಾ‌ ಅಭಿಯಾನಕ್ಕೆ‌ ಚಾಲನೆ‌ ನೀಡಲಾಗುವುದು. ಶ್ರೀರಾಮಸೇನೆ ಸಾವಿರಾರು ಕಾರ್ಯಕರ್ತರು ದತ್ತ ಮಾಲಾಧಾರಣೆ ಮಾಡಲಿದ್ದಾರೆ. ಇನಾಂ ದತ್ತಾತ್ರೇಯ ಬಾಬಾ ಬುಡನ್ ಗಿರಿ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಭಿಯಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಕಲ ಮುಂಜಾಗ್ರತೆ ಕೈಗೊಳ್ಳಲಾಗಿದೆ.
ಅ.28ರಂದು ಇನಾಂ‌ ದತ್ತಾತ್ರೇಯ ಬಾಬಾ ಬುಡನ್ ಗಿರಿಗೆ ತೆರಳಿ‌ ದತ್ತಪಾದುಕೆ ದರ್ಶನ, ಬೃಹತ್ ಶೋಭಾಯಾತ್ರೆಯೊಂದಿಗೆ ಅಭಿಯಾನ ಮುಕ್ತಾಯಗೊಳ್ಳಲಿದೆ. ಬೃಹತ್ ಶೋಭಾಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯ ದತ್ತಮಾಲಾ‌ಧಾರಿಗಳು ಭಾಗಿಯಾಗುವ ಸಾಧ್ಯತೆ ಇದೆ.
First published: October 22, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

ಸರ್ಕಾರಿ ವಸತಿಗೃಹಗಳು ಈಗ ನೌಕರರ ಹೆಸರಲ್ಲಿ!: ಕೊಪ್ಪಳದಲ್ಲಿ ಬಾಡಿಗೆದಾರರೇ ಮಾಲೀಕರು!

news18
Updated: October 22, 2018, 8:56 AM IST
ಸರ್ಕಾರಿ ವಸತಿಗೃಹಗಳು ಈಗ ನೌಕರರ ಹೆಸರಲ್ಲಿ!: ಕೊಪ್ಪಳದಲ್ಲಿ ಬಾಡಿಗೆದಾರರೇ ಮಾಲೀಕರು!
ಬಸವರಾಜ ಕರುಗಲ್, ನ್ಯೂಸ್ 18 ಕನ್ನಡ
ಕೊಪ್ಪಳ(ಅ.22): ಸರ್ಕಾರಿ ನೌಕರರಿಗೆ ಸರ್ಕಾರದ ಕ್ವಾರ್ಟ್ರಸ್ ಸಿಗುತ್ತದೆ. ಕೆಲವರು ಹಲವಾರು ವರ್ಷಗಳಿಂದ ಅಲ್ಲೇ ವಾಸ ಮಾಡುತ್ತಾರೆ. ಆದರೆ ಇನ್ನು ಕೆಲವ್ರು ಖಾಲಿನೇ ಮಾಡ್ದೇ ಇರೋ ಸುದ್ದೀನೂ ಕೇಳಿರ್ತೀರಿ. ಆದ್ರೆ, ಇಲ್ಲಿ ನೌಕರರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಸರ್ಕಾರಿ ಮನೆಯನ್ನ ತಮ್ಮ ಹೆಸರಿಗೇ ಮಾಡ್ಕೊಂಡುಬಿಟ್ಟಿದ್ದಾರೆ. ಈ ವಿಷಯ ಈಗ ಲೋಕಾಯುಕ್ತರವರೆಗೂ ತಲುಪಿದೆ. ಈ ಬಗ್ಗೆ ತನಿಖೆ ಮಾಡಿ ಮಾಹಿತಿ ಕೊಡಿ ಅಂತ ಲೋಕಾಯುಕ್ತರ ಕಚೇರಿಯಿಂದ ಲೋಕೋಪಯೋಗಿ ಇಲಾಖೆಗೆ ಪತ್ರವೂ ಬಂದಿದೆ. ಈ ಪತ್ರದ ಕಾಪಿ ಈಗ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.
ಕೊಪ್ಪಳದ ಬಸವ ನಗರದ ಎದುರಿಗೆ 30ಕ್ಕೂ ಹೆಚ್ಚು ಅಧಿಕ ವರ್ಷಗಳ ಹಿಂದೆ ವಸತಿ ಗೃಹಗಳನ್ನು ನಿರ್ಮಿಸಲಾಗಿತ್ತು. ಕರ್ನಾಟಕ ಗೃಹ ಮಂಡಳಿ ನೌಕರರಿಗೆ ಅಂತ ಈ ಮನೆಗಳನ್ನ ಕಟ್ಟಿಸಿತ್ತು. ನಂತರ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿತ್ತು. ಆದ್ರೆ, ಸುಮಾರು 20 ರಿಂದ 25 ವರ್ಷಗಳಿಂದ ವಸತಿ ಗೃಹಗಳಲ್ಲಿ ವಾಸವಾಗಿರೋ ನೌಕರರು ಈ ಮನೆಗಳನ್ನು ತಮ್ಮ ಹೆಸರಿಗೇ ನೋಂದಣಿ ಮಾಡ್ಕೊಂಡಿದ್ದಾರೆ.
ಈ ಬಗ್ಗೆ ಕೇಳಿದ್ರೆ ಪ್ರಕರಣ ಕೋರ್ಟ್‌ನಲ್ಲಿದೆ. ಮುಂದೆನಾಗುತ್ತೋ ನೋಡ್ಬೇಕು ಅಂತಾರೆ ಲೋಕೋಪಯೋಗಿ ಇಲಾಖೆಯ ಎಗ್ಸಿಕ್ಯೂಟಿವ್ ಎಂಜಿನಿಯರ್ ರೇಣುಕಾ ಪಾಟೀಲ.
ಅಚ್ಚರಿಯ ವಿಷಯ ಅಂದ್ರೆ ಪ್ರತಿ ವರ್ಷ ಲೋಕೋಪಯೋಗಿ ಇಲಾಖೆಯೇ ಪ್ರತಿ ವಸತಿ ಗೃಹಕ್ಕೂ ತಗಲುವ ವೆಚ್ಚವನ್ನ ಕರ್ನಾಟಕ ಗೃಹ ಮಂಡಳಿಗೆ ಭರಿಸ್ತಿದೆ. ಆದ್ರೆ ಸರ್ಕಾರಿ ನೌಕರರಿಗೆ ಮನೆಗಳನ್ನು ತಮ್ಮ ಹೆಸರಿನಲ್ಲಿ ನೋಂದಾಯಿಸಿಕೊಳ್ಳಲು ಸೂಚಿಸಿದ್ದೇ ಕರ್ನಾಟಕ ಗೃಹ ಮಂಡಳಿ ಅನ್ನೋ ಆರೋಪ ಇದೆ. ಇದೆಲ್ಲಾ ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.
First published: October 22, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

ಮೇಯರ್ ಆಗಿದ್ದಾಗ ಸಂಪತ್ ರಾಜ್ ಮಾಡಿದ ಯಡವಟ್ಟೇನು ಗೊತ್ತಾ ?

G Hareeshkumar | news18
Updated: October 22, 2018, 9:06 AM IST
ಮೇಯರ್ ಆಗಿದ್ದಾಗ ಸಂಪತ್ ರಾಜ್ ಮಾಡಿದ ಯಡವಟ್ಟೇನು ಗೊತ್ತಾ ?
- ಥಾಮಸ್ ಪುಷ್ಪರಾಜ್, ನ್ಯೂಸ್ 18 ಕನ್ನಡ 
ಬೆಂಗಳೂರು (ಅ.22) :  ಮೇಯರ್ ಸ್ಥಾನದಿಂದ ಕೆಳಗಿಳಿಯುವ ಮುನ್ನ ಸಂಪತ್ ರಾಜ್ ಮಾಡಿದ ಯಡವಟ್ಟು ದಲಿತ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಸಂವಿಧಾನಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಮಾಡಬೇಕೆನ್ನುವ ಅವಸರದಲ್ಲಿ ಕಾಟಾಚಾರದಲ್ಲಿ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಅಂಬೇಡ್ಕರ್​​ಗೆ ಮಾಡಿದ ಅವಮಾನ ಎಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಬಿಬಿಎಂಪಿ ಕೇಂದ್ರ ಕಛೇರಿ ಆವರಣದಲ್ಲಿಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಅದು  ಪುತ್ಥಳಿ ಅಲ್ಲ, ಕಾಟಾಚಾರದ ಪ್ರತಿಮೆ ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ,  ಮೂರ್ತಿ ಎಲ್ಲಿ ಎಂದು ಕೇಳಿದರೆ ಎಂಪಿಎಡ್ ವಿಭಾಗಕ್ಕೂ ಮಾಹಿತಿಯಿಲ್ಲ, ರೆಡಿಯಾಗುತ್ತಿದೆ. ಇನ್ನೂ ಬಂದಿಲ್ಲ ಎನ್ನುವ ಉತ್ತರ ನೀಡುತ್ತಾರೆ.
ಬೀಳುವ ಹಂತದಲ್ಲಿ  ಕಾಟಾಚಾರದ ಪುತ್ಥಳಿ
ಕಾಟಾಚಾರಾದ ಪುತ್ಥಳಿ ಅನ್ನುವ ವಿಚಾರಕ್ಕಿಂತ ಮತ್ತೊಂದು ಆತಂಕದ ವಿಚಾರ ಏನಂದರೆ ಈ ಪ್ರತಿಮೆಯೂ ಬೀಳುವ ಹಂತದಲ್ಲಿದೆ. ಪ್ರತಿದಿನ ಇದಕ್ಕೆ ಹಾರ ಹಾಕುವ ಸಿಬ್ಬಂದಿಗಳು ಇದನ್ನು ಸ್ಪಷ್ಟ ಪಡಿಸಿದ್ದಾರೆ. ಪುತ್ಥಳಿಗೆ ಹಾಕಿರುವ ಬೋಲ್ಟು ನಟ್ಟು ಕೂಡ ಲೂಸ್ ಆಗಿರುಚ ಕಾರಣಕ್ಕೆ ಪುತ್ಥಳಿ ಅಲ್ಲಾಡುತ್ತಿದೆ.
ಪುತ್ಥಳಿ ಸ್ಥಾಪನೆಗೆ 1 ಕೋಟಿ  ಹಣ ವೆಚ್ಚ
ಈ ಬಗ್ಗೆ  ಸಂಬಂಧಿಸಿದವರ ಗಮನಕ್ಕೆ ತಂದರೂ ತಲೆಕೆಡಿಸಿಕೊಂಡಿಲ್ಲ. ಆತಂಕದಲ್ಲಿಯೇ ದಿನನಿತ್ಯ ಹಾರ ಹಾಕುತ್ತಿದ್ದಾರೆ. ಡಮ್ಮಿ ಪುತ್ಥಳಿ ಅನಾವರಣಗೊಂಡು ಎರಡು ತಿಂಗಳು  ಕಳೆಯುತ್ತಾ ಬಂದ್ದರು.  ಬದಲಿಸಿ ಒರಿಜಿನಲ್ ಪುತ್ಥಳಿ ಸ್ಥಾಪಿಸದೇ ಅಂಬೇಡ್ಕರ್ ಗೆ ಅಪಮಾನ ಮಾಡಲಾಗಿದೆ. ಒರಿಜಿನಲ್ ಪ್ರತಿಮೆಗೆ 1 ಕೋಟಿಗಿಂತಲೂ ಹೆಚ್ಚು ಹಣ ಖರ್ಚು ಮಾಡಲಾಗಿದೆ.
ಖರ್ಚು ಮಾಡಿರುವ ಹಣದ ಬಗ್ಗೆ ಸಾಕಷ್ಟು ಅನುಮಾನ ಮೂಡಿಸಿದೆ.  ಮಾಜಿ ಮೇಯರ್ ಸಂಪತ್​ರಾಜ್  ಅವರು ಕಾಟಾಚಾರದ ಪುತ್ಥಳಿ ಪ್ರತಿಷ್ಠಾಪಿಸಿ ಅಂಬೇಡ್ಕರ್ ಗೆ ಅಪಮಾನ ಮಾಡಿರುವುದಕ್ಕೆ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ದಲಿತ ಆಗ್ರಹಿಸಿದ್ದಾರೆ.

ಇದನ್ನೂ ಓದಿರಿ

Comments

Popular posts from this blog